ಸೇವೆ

ಯಶಸ್ವಿನಿ ಯೋಜನೆಯಡಿಯಲ್ಲಿ ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಿವಿ, ಮೂಗು, ಗಂಟಲು ವ್ಯಾದಿಗಳು, ಕರುಳಿನ ಖಾಯಿಲೆಗಳು, ನರಗಳಿಗೆ ಸಂಬಂಧಿಸಿದ ಖಾಯಿಲೆಗಳು, ಕಣ್ಣಿನ ಖಾಯಿಲೆಗಳು, ಮೂಳೆ ರೋಗಗಳು, ಸ್ತ್ರೀಯರಿಗೆ ಸಂಬಂಧಿಸಿದ ಖಾಯಿಲೆಳಿಗೆ ಚಿಕಿತ್ಸಾ ಸೌಲಭ್ಯಗಳನ್ನು ಗುರ್ತಿಸಿದ ರಾಜ್ಯದ ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು.

ಪ್ರಸ್ತುತ ಆಯುಷ್ಯಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಗುರ್ತಿಸಿರುವ 1650 ಚಿಕಿತ್ಸೆಗಳನ್ನು ಮತ್ತು 478 ICU ಚಿಕಿತ್ಸೆಗಳೂ ಸೇರಿ ಒಟ್ಟು 2128 ಚಿಕಿತ್ಸೆಗಳನ್ನು ಯಶಸ್ವಿನಿ ಯೋಜನೆಗೆ ಆಳವಡಿಸಿಕೊಳ್ಳಲಾಗಿದೆ.

ಯಶಸ್ವಿನಿ ಸದಸ್ಯರಿಗೆ ಜನರಲ್ ವಾರ್ಡ್ನಲ್ಲಿ ಚಿಕಿತ್ಸಾ ಸೌಲಭ್ಯ ಪಡೆಯಲು ಅರ್ಹತೆ ಹೊಂದಿರುತ್ತಾರೆ. ರೋಗಿಗಳು ಸ್ವ ಇಚ್ಚೆಯೊಂದಿಗೆ ಉನ್ನತ ವಾರ್ಡ್ ಕೋರಿದಲ್ಲಿ Sharing 2 or 3 Bed ಗೆ 15% ರಷ್ಟು ಹೆಚ್ಚಳ ಮತ್ತು Private Room ಅಥವಾ Single Bed ತೆಗೆದುಕೊಂಡಲ್ಲಿ 25% ರಷ್ಟು ಹೆಚ್ಚಳದೊಂದಿಗೆ ಉನ್ನತ ವಾರ್ಡ್ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿದೆ. ಹೆಚ್ಚುವರಿ ಮೊತ್ತವನ್ನು ರೋಗಿಗಳೇ ಭರಿಸತಕ್ಕದ್ದು. ಯಶಸ್ವಿನಿ ಯೋಜನೆಯಲ್ಲಿ ನೆಟ್ವರ್ಕ್ ಆಸ್ಪತ್ರೆಯಲ್ಲಿ ಒದಗಿಸಿರುವ ಚಿಕಿತ್ಸಾ ಸೌಲಭ್ಯದಲ್ಲಿ ಔಷಧಿ ವೆಚ್ಚ, ಆಸ್ಪತ್ರೆ ವೆಚ್ಚ, ಶಸ್ತ್ರಚಿಕಿತ್ಸೆಯ ವೆಚ್ಚ, ಆಪರೇಶನ್ ಥೀಯೆಟರ್ ಬಾಡಿಗೆ, ಅರೆವಳಿಕೆ ತಜ್ಞರ ಫೀ, ಸರ್ಜನ್ ಫೀ, ಕನ್ಸಲ್ಟೆಂಟ್ ಫೀ, ಬೆಡ್ ಚಾರ್ಜ್, ನರ್ಸ್ ಫೀ ಇತ್ಯಾದಿ ವೆಚ್ಚ ಒಳಗೊಂಡಿರುತ್ತದೆ.

ಯಶಸ್ವಿನಿ ಯೋಜನೆಯಲ್ಲಿ ಪ್ಯಾಕೇಜಿನಲ್ಲಿ Implants ಅಗತ್ಯವಿರುವ ಕಡೆ Implants ದರವನ್ನು ಒಳಗೊಂಡಿರುತ್ತದೆ. (Ex. Knee replacement, lence in cataract surgery) ಒಂದು ವೇಳೆ ಫಲಾನುಭವಿಗಳ ಉನ್ನತ Implants ಅಥವಾ lence ಪಡೆಯಲು ಸ್ವ - ಇಚ್ಛೆಯಿಂದ ಒಪ್ಪಿಗೆ ಸೂಚಿಸಿದಲ್ಲಿ, ಅಂತಹ ಉನ್ನತ Implants ಮತ್ತು lence ಗೆ ತಗಲುವ ವ್ಯತ್ಯಾಸದ ಹೆಚ್ಚುವರಿ ಮೊತ್ತವನ್ನು ಅಂತಹ ಫಲಾನುಭವಿಗಳೇ ಭರಿಸತಕ್ಕದ್ದು.

ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಯಶಸ್ವಿನಿ ಸದಸ್ಯರಿಗೆ ಹೊರ ರೋಗಿ ಚಿಕಿತ್ಸೆಗೆ (OPD) ಗರಿಷ್ಠ ರೂ.200/-ಗಳನ್ನು (ಮೂರು ತಿಂಗಳ ಅವಧಿಗೆ) ಮಿತಿ ನಿಗಧಿಪಡಿಸಿದ್ದು, ಪೈಕಿ ರೂ.100/-ಗಳನ್ನು ಯಶಸ್ವಿನಿ ಟ್ರಸ್ಟ್ವತಿಯಿಂದ ಪಾವತಿಸಲಾಗುವುದು.